ದೆಹಲಿಯಲ್ಲಿ ಹೋರಾಟಗಾರರ ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿರೋಧ ರ್ಯಾಲಿ
ಮಂಗಳೂರು: ದೆಹಲಿಯಲ್ಲಿ ಹೋರಾಟಗಾರರ ಬಂಧನ ಹಾಗೂ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ‘ಪ್ರಜಾಪ್ರಭುತ್ವ ಉಳಿಸಿ ಆಂದೋಲನ ಸಮಿತಿ’ ವತಿಯಿಂದ ಅಕ್ಟೋಬರ್ 10ರಂದು ಮಂಗಳೂರಿನಲ್ಲಿ ಪ್ರತಿರೋಧ ರ್ಯಾಲಿ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವಾಗಿರುವ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಬಳಿಯಿಂದ ಕ್ಲಾಕ್ ಟವರ್ವರೆಗೆ ರ್ಯಾಲಿ ನಡೆಯಲಿದೆ. ಪ್ರತಿಭಟನಾ ರ್ಯಾಲಿ ಹಾಗೂ ಸಭೆಯಲ್ಲಿ ಜಿಲ್ಲೆಯ ಎನ್ಡಿಎಯೇತರ ರಾಜಕೀಯ ಪಕ್ಷಗಳ ಮುಖಂಡರು ಮತ್ತು…
ಬದಿಯಡ್ಕ ತುಳು ಭವನದಲ್ಲಿ ಸಂಭ್ರಮದ ‘ತುಳು ಲಿಪಿ ದಿನಾಚರಣೆ’: ಪುಣಿಚಿತ್ತಾಯ ಹಾಗೂ ಕಾರಂತರ ಸಂಸ್ಮರಣೆ
ಬದಿಯಡ್ಕ: ಸ್ಥಳೀಯ ತುಳು ಭವನದಲ್ಲಿ ತುಳು ಲಿಪಿ ದಿನಾಚರಣೆ ಹಾಗೂ ತುಳುನಾಡಿನ ಮೇರು ಸಂಶೋಧಕ ದಿ. ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಮತ್ತು ಕಡಲತೀರದ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ ಸಂಸ್ಮರಣಾ ಕಾರ್ಯಕ್ರಮ ಬದಿಯಡ್ಕದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ತುಳು ಭವನ ಸಮಿತಿಗಳ ಆಶ್ರಯದಲ್ಲಿ ಶನಿವಾರ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಮಾಜಿಕ ಹಾಗೂ ರಾಜಕೀಯ ನೇತಾರ ಮಂಜುನಾಥ ಆಳ್ವ ಮಡ್ವ ಅವರು ಮಾತನಾಡಿ, “ತುಳು ಭಾಷೆಗೆ ಶ್ರೀಮಂತವಾದ ಇತಿಹಾಸ…
ದೆಹಲಿಯಲ್ಲಿ ಪೊಲೀಸ್ ವಶಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ; ಮಹಾರಾಷ್ಟ್ರದಲ್ಲಿ ಅಜ್ಜಿ ಸವಿತ್ರಿಬಾಯಿ ನಿಧನ
ಮುಂಬೈ: ಕೋಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಬಂಧನಕ್ಕೆ ಒಳಪಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಅವರ ಹುಟ್ಟೂರಿನಲ್ಲಿ ಅಜ್ಜಿ ಸವಿತ್ರಿಬಾಯಿ ಶಂಕರ್ ದೀಪ್ಕೆ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತೂಕ್ ಪಿಂಪ್ರಿ ಗ್ರಾಮದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದ ಸವಿತ್ರಿಬಾಯಿ ಅವರು, ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ…
ಮಂಗಳೂರು ಕೆಎಸ್ಆರ್ಟಿಸಿಯಿಂದ ದಸರಾ ದರ್ಶನ ವಿಶೇಷ ಟೂರ್ ಪ್ಯಾಕೇಜ್ಗೆ ಚಾಲನೆ
ದಿನಾಂಕ 11.06.2026ರಂದು 5ನೇ ವರ್ಷದ ಮಂಗಳೂರು ವಿಭಾಗದ ದಸರಾ ದರ್ಶನ ವಿಶೇಷ ಟೂರ್ ಪ್ಯಾಕೇಜ್ ಅನ್ನು ಪ್ರಾರಂಭಿಸಲಾಗುವುದು .ಸದರಿ ಟೂರ್ ಪ್ಯಾಕೇಜ್ ನ ವಿವರ ಈ ಶುಭ ಸಮಯದಲ್ಲಿ ದೃಶ್ಯ ಮಾಧ್ಯಮದ ಹಾಗೂ ಪ್ರಿಂಟ್ ಮೀಡಿಯಾದ ಎಲ್ಲಾ ಪತ್ರಕರ್ತ ಬಂಧುಗಳು ಆಗಮಿಸಿ, ದಸರಾ ದರ್ಶನ ವಿಶೇಷ ಪ್ಯಾಕೇಜ್ ಅನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ಕೋರಲಾಗಿದೆ. ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಾಗೂ ಅಧಿಕಾರಿ ವೃಂದಕರಾರಸಾ ನಿಗಮ ಮಂಗಳೂರು
17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ
ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ: 163/2009 ಕಲಂ: 11,13,32, 33,34, 38(a), 43 KE Act ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು 17 ವರ್ಷ ಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 143/2023 ಕಲಂ 143,147, 448, 427, 436, 307, 149 IPC ಪ್ರಕರಣದಲ್ಲಿ ಆರೋಪಿಯಾಗಿ ವಾರೆಂಟ್ ಜಾರಿಯಾಗಿದ್ದ ಬಂಟ್ವಾಳ ತಲಪಾಡಿ ನಿವಾಸಿ ಹನೀಫ್@ ಕೊಕ್ಕಡ ಹನೀಫ್ (57) ಎಂಬಾತನನ್ನು ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿ…
ನಶ ಮುಕ್ತ ಭಾರತ ಪರಿಕಲ್ಪನೆಯಡಿಯಲ್ಲಿ ‘ನೆರೆಹೊರೆಯ ಯುವ ಸಂಸತ್ 2026–27’ ಕಾರ್ಯಕ್ರಮ
ಮಂಗಳೂರು, ಅಕ್ಟೋಬರ್ 10, 2026: ರಾಷ್ಟ್ರೀಯ ಯುವ ನಾಯಕರ ಕಾರ್ಯಕ್ರಮದ (NYLP) ಭಾಗವಾಗಿ, ಮಂಗಳೂರಿನ ಯೆನೆಪೋಯ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಸಂಸ್ಥೆಯ (YIASCM) YMK ಸಭಾಂಗಣದಲ್ಲಿ “ನೆರೆಹೊರೆಯ ಯುವ ಸಂಸತ್ 2026–27” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ‘ಮೇರಾ ಯುವ ಭಾರತ್’ (MY Bharat), ರಾಷ್ಟ್ರೀಯ ಸೇವಾ ಯೋಜನೆಯ (NSS) ಘಟಕ 8 ಮತ್ತು 18ರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. “ನಶ ಮುಕ್ತ ಭಾರತ…
ಚಂಡೀಗಢ: ಟ್ಯಾಗೋರ್ ರಂಗಮಂದಿರದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಪ್ರೇಕ್ಷಕರನ್ನು ಆಕರ್ಷಿಸಿದ ಹಿಂದಿ ಯಕ್ಷಗಾನ
ಚಂಡೀಗಢ: ಚಂಡೀಗಢ ಆಡಳಿತವು ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮದಡಿಯಲ್ಲಿ ಚಂಡೀಗಢದ ಸೆಕ್ಟರ್ 18 ರ ಟ್ಯಾಗೋರ್ ಥಿಯೇಟರ್ನಲ್ಲಿ “ಶ್ರೀ ದೇವಿ ಮಹಾತ್ಮೆ” ಎಂಬ ಹಿಂದಿ ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು.ಪಂಜಾಬ್ನ ಗೌರವಾನ್ವಿತ ರಾಜ್ಯಪಾಲರು ಮತ್ತು ಯುಟಿ ಚಂಡೀಗಢದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಹಿರಿಯಡ್ಕ ರಾಜೇಶ್ ಪ್ರಸಾದ್ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿ ಕೆಎಪಿ ಸಿನ್ಹಾ ಅವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು….
ಮಂಗಳೂರು ವಿಮಾನ ನಿಲ್ದಾಣದಿಂದ ಚಳಿಗಾಲದಲ್ಲಿ ಹೆಚ್ಚುವರಿ ವಿಮಾನ ಸೇವೆ
ಮಂಗಳೂರು: ಬಜಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) ಮುಂಬರುವ ಚಳಿಗಾಲದಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ವಿಮಾನ ಯಾನದ ಸಿದ್ಧತೆ ನಡೆಸಿದೆ.ಇದೇ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಕುವೈತ್ಗೆ ವಿಮಾನಗಳನ್ನು ಪುನರಾರಂಭಿಸಲಿದ್ದು, ಮಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಸ್ ಅಲ್ ಖೈಮಾದ ಹೊಸ ರೂಟ್ನ ವಿಮಾನ ಯಾನ ಆರಂಭಗೊಳ್ಳಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ. ಹೊಸ ರೂಟ್ ಅಲ್ ಕೈಮಾಕ್ಕೆ ಅ.31ರಿಂದ ವಿಮಾನ ಯಾನ ಆರಂಭಗೊಳ್ಳಲಿದ್ದು, ಈ ಮೂಲಕ ಮಂಗಳೂರಿ ನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ನ…
ಎಸ್ಐಆರ್ ವಿರುದ್ಧದ ಹೋರಾಟಕ್ಕೆ ಹೆದರಿ ಕೇಂದ್ರದಿಂದ ದಮನಕಾರಿ ಕ್ರಮ: ಸಂತೋಷ್ ಬಜಾಲ್
ಮಂಗಳೂರು :56 ಇಂಚಿನ ಎದೆಯನ್ನು ಝೆನ್ ಝೀ ಹೋರಾಟ ಕುಗ್ಗಿಸಿದೆ ಎಂದು ಸಂತೋಷ್ ಬಜಾಲ್ ಹೇಳಿದ್ದಾರೆ.ಎಸ್ಐಆರ್ ರದ್ಧತಿಗೆ ಆಗ್ರಹಿಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಎಡಪಂಥೀಯ ಸಂಘಟನೆಗಳು ರಾಜ್ಯವ್ಯಾಪಿ ಹೋರಾಟಕ್ಕೆ ಕರೆನೀಡಿದ ಭಾಗವಾಗಿ ಎಸ್ಎಫ್ಐ, ಡಿವೈಎಫ್ಐ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯು ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ ಐನ ರಾಜ್ಯ ಕಾರ್ಯದರ್ಶಿಯಾದ ಸಂತೋಷ್ ಬಜಾಲ್ ಮಾತನಾಡುತ್ತಾ ದೇಶದ ನಾಗರಿಕತ್ವ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಎಸ್ಐಆರ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಚಳುವಳಿಗಳನ್ನು ಹತ್ತಿಕ್ಕುವ…
ಅಕ್ರಮ ಗೋಸಾಗಾಟ ಪ್ರಕರಣದ ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ.
ಪುತ್ತೂರು: ಅಕ್ರಮ ಗೋಸಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಯ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳಿಲ್ಲದೆ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ, ಆರೋಪಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಜಪ್ತಿ ಮಾಡಲಾಗಿದೆ. 2026ರ ಅಕ್ಟೋಬರ್ 5ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ಸಂಖ್ಯೆ 125/2026 ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಪ್ರಸಾದ್ ಎಂಬವರು ತಮ್ಮ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ…

